ಅದೊಂದು ಹುಚ್ಚು ನನಗೆ. ನಿರಾಳ ರಾತ್ರಿಗಳಲ್ಲಿ ನೇತ್ರಾವತಿಯ ದಂಡೆಯಲ್ಲೋ, ಕುಮಾರಧಾರೆಯ್ ಪಕ್ಕದಲ್ಲೋ, ಕುಳಿತು ಬೆಳ್ಳಬೆಳ್ಳನೆ ಚಂದಿರನನ್ನು ಕ್ಣ್ತುಂಬಾ ತೊಂಬಿಕೊಳ್ಳೋದು. ಮೊದಲೆಲ್ಲಾ ಅಲ್ಲಿ ಏನೇನೋ ಕನಸುಗಳು ಹುಟ್ಟಿಕೊಳ್ಳುತ್ತಿದ್ದವು. ಹಾಳೆಯ ಮೇಲೆಲ್ಲಾ ಕವನಗಳು ತುಂಬಿಕೊಳ್ಳುತ್ತಿದ್ದವು. ಕಾಲ ಬದಲಾಗಿದೆಯೋ ಗೊತ್ತಿಲ್ಲ. ನಾನಂತೂ ಬದಲಾಗಿದ್ದೇನೆ.
ಈಗ ಚಂದಿರನಲ್ಲಿ ನಿನ್ನ ಮೊಗವಿದೆ ಹುಡುಗಿ. ಕವನಗಳ ಬದಲು ಬರೀ ಪ್ರೇಮಪತ್ರವನ್ನೇ ಬರೆಯುತ್ತಿದ್ದೇನೆ. ಇದರ ಹಾಗೆ ! ಒಂದು......ಎರಡು..... ಮೂರು.......ಊಹುಂ, ಅದೆಷ್ಟು ಹಾಳೆಗಳು ಸುಮ್ಮನೆ ಈ ನದಿಗುಂಟಾ ತೇಲಿ ಹೋಗಿವೆಯೋ? ಲೆಕ್ಕವಿಟ್ಟವರಾರು ?
ನಿನ್ ಜೊತೆ ಜಗಳವಾಡಿದಷ್ಟೂ ಪ್ಫ್ರೀತಿ ಜಾಸ್ತಿ ಆಗತ್ತೆ. ಜಗತ್ತು ನಗುತ್ತದೆ. ಬೇಕಾದಷ್ಟು ಮಾತಡತ್ತೆ. ಅದಕ್ಕೇನು ಗೊತ್ತು? ಅದು ಯಾವತ್ತಾದರೂ, ಯಾರನ್ನಾದರೂ ಪ್ರೀತಿಸಿತ್ತಾ ? ಎಷ್ಟೋ ಜನ ಬಂದರು, ಹೋದರು. ಜಗತ್ತು ಅದರ ಪಾಡಿಗೆ ನಿರಾಳ. ಬಿಟ್ಟುಬಿಡೋಣ್ ಅದನ್ನು ಅದರ ಪಾಡಿಗೆ. ನಮಗ್ಯಾಕೆ ಹಂಗು? ಭೆರೆಯವರ ಉಸಾಬರಿ ?
ಜಗತ್ತು
ಜಯಿಸುತ್ತೇನೋ ಇಲ್ಲವೋ ಗೊತ್ತಿಗಿತ್ತಿಲ್ಲ. ನೀನಿದ್ದರೆ ಸಾಕು, ಗ್ಎಲ್ಲುವ ಛಲ ಅದೆಲ್ಲಿಂದಲೋ ಹುಟ್ಟಿಕೊಳ್ಳತ್ತೆ. ಅವ್ಯಕ್ತ ಹಪಹಪಿಕೆ ಸೊಟ್ಟಗೆ ಎದ್ದು ಬಿಡತ್ತೆ. ನೀನು ಅದೆಂಥಾ ಮಾಯವಿ ? ಜಗತ್ತೇ ಬೇಡ ಅಂತ ಅಂಡಲೆಯುತ್ತಿದ್ದವ ನಾನು. ಅದೆಲ್ಲಿಂದಲೋ ಎಳೆದು ತಂದೆ. ಬದುಕು ಅಂದೆ.
ಬದುಕುತ್ತಿದ್ದೇನೋ ಇಲ್ಲವೋ ಗೊತ್ತಿಲ್ಲ. ಬದುಕಬೇಕು ಅನ್ನಿಸಿದೆ. ನಿನಗಾಗಿ, ನಿನ್ನ ಪ್ರೀತಿಗಾಗಿ. ನಿನ್ನ ಉಸಿರು ನನ್ನೊಂದಿಗಿದ್ದರೆ ಸಾಕು ವಚಂದಿರನತ್ತ ಹೋಗಿ ಬರಬಲ್ಲೆ. ಇಂಧನ ಬೇಕಿಲ್ಲ. ಇದು ಪತ್ರವೋ ಹಪಹಪಿಕೆಯೋ ಗೊತ್ತಿಲ್ಲ. ಆದರೆ, ಭಾವನೆಗ್ಳು ಮಾತ್ರ ನಿನ್ನವೇ. ನನಗೆ ಗೊತ್ತಿರೋದು ಇಷ್ಟೇ ಹುಡುಗೀ.... ಪ್ರೀತಿ ಅಂದ್ರೆ .... ನೀನು- ನಾನು.
ಅದೆಷ್ಟೋ ದಿನಗಳ ಬಳಿಕ ಚಂದಿರನನ್ನು ದಿಟ್ಟಿಸಿದ್ದೆ. ಅಲ್ಲಿ ನಿನ್ನ ಮೊಗವಿತ್ತು. ನಾನು ನಿನ್ನ ಪ್ರೀತಿಸ್ತೀನಾ ? ಪ್ರೀತಿಸಿದ ಮೇಲೆ, ಆ ಪ್ಫ್ರಶ್ನೆ ಕೇಳೋ ಹಕ್ಕಿಲ್ಲ ಅಲ್ವಾ ? ನೋಡು, ನನ್ನ ನೋಡಿ ಆ ಚಂದ್ರ್ ಕೂಡಾ ನಗ್ತಾ ಇದ್ದಾನೆ. ಅಮ್ಮ ಕರೀತಿದ್ದಾರೆ. ನಾಳೆ ಮತ್ತೆ ಬರೆಯುತ್ತೇನೆ. ನಾಗಣ್ಣನ ಬಸ್ ನಲ್ಲಿ ಬರೋ ಪೋಸ್ಟ್ ಗಾಗಿ ಕಾಯ್ತಾ ಇರು.

ಲೋಡ್ ಆಗುತ್ತಿದೆ......
ಪ್ರತಿಸ್ಪಂದನಗಳು